ಸುವರ್ಣಕಟ್ಟೆ ಸಹ್ಯಾದ್ರಿ ತಪ್ಪಲಿನ ಒಂದು ಊರು. ಈ ಊರಿನ ಸ್ವಲ್ಪ ದೂರದಲ್ಲಿ ಕುಮಾರ ಪರ್ವತ ಅನ್ನೊ ಬೆಟ್ಟ. ಆ ಬೆಟ್ಟದ ಬುಡದಲ್ಲಿ ಒಂದು ಅತಿಥಿಗೃಹ. ಗಂಗಮ್ಮ, ಅವಳ ಮಗ ಮತ್ತು ಸೊಸೆ ಸೇರಿ ನಡೆಸುತ್ತಿರುವ ಈ ಅತಿಥಿಗೃಹದ ಸುತ್ತಮುತ್ತ ಬೇರೆ ಯಾವ ಮನೆಯೂ ಇಲ್ಲ. ಇದನ್ನು ಹತ್ತಿರದ ಊರಿಗೆ ಸೇರಿಸೋದು ಒಂದು ಸಣ್ಣ, ಶಿಥಿಲ ಸೇತುವೆ ಮಾತ್ರ. ಪಕ್ಕದಲ್ಲಿ ತುಂಬಿ ಹರಿಯುತ್ತಿರುವ ಹೊಳೆ. “ಧೋ” ಎಂದು ಸುರಿಯುತ್ತಿರುವ ಮಲೆನಾಡಿನ ಮಳೆ. ಇಂಥ ಮಳೆಗಾಲದ ಸಮಯದಲ್ಲಿ ಕೆಲವು ಕುತೂಹಲಕಾರಿ ವ್ಯಕ್ತಿಗಳು ಅತಿಥಿಗಳಾಗಿ ಈ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಸಮಯದಲ್ಲೇ ಸುವರ್ಣಕಟ್ಟೆಯಲ್ಲಿ ನಡೆಯುವ ಕೊಲೆಗೂ ಮತ್ತು ಮುಂದೆ ಈ ಅತಿಥಿಗೃಹದಲ್ಲಿ ನಡೆಯುವ ಘಟನೆಗಳಿಗೂ, ಅಲ್ಲಿರುವ ಕುತೂಹಲಕಾರಿ ವ್ಯಕ್ತಿಗಳಿಗಿರುವ ಸಂಬಂಧ…ಏನು? ಈ ಘಟನೆಗಳ ಹಿಂದಿರುವ ಆ ನಿಗೂಢ ವ್ಯಕ್ತಿ ಯಾರು…?
Suvarna Katte is a small village hidden at the base of Sahyadri mountain range. A homestay is located a few miles from Suvarna Katte at the base of Kumara Parvatha mountain. The only access to this house from the village is a fragile hanging bridge. Gangamma, manages this homestay with her son and daughter-in-law. It is monsoon season! The relentless Malnad rains have caused the nearby river to overflow. A few interesting characters are staying in the guest house. At this time, a murder takes place at Suvarna Katte followed by a series of mysterious events! Are the people in the house anyway connected to these events? What’s the mystery behind all this?
Written By : Rajendra Karanth
Directed By : Ashok Kumar S